Nrupatunga Hill.
ನೃಪತುಂಗ ಬೆಟ್ಟ (ಧರೆಗಿಳಿದ ಸ್ವರ್ಗ) ಕರ್ನಾಟಕ ರಾಜ್ಯದ ನಾಲ್ಕನೆಯ ದೊಡ್ಡ ಜಿಲ್ಲೆ ಎಂದು ಪರಿಗಣಿಸಲ್ಟಟ್ಟಿರುವ ಧಾರವಾಡ ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಿನಂತಿರುವ ಜಿಲ್ಲೆ.ಅದರಲ್ಲೂ ಹುಬ್ಬಳ್ಳಿ ಎಂದ ತಕ್ಷಣ ವಾಣಿಜ್ಯೋದ್ಯಮದ ತಾಣ ಎಂದು ಎಲ್ಲರ ಮನದಲ್ಲೂ ಬೇರೂರಿಬಿಟ್ಟಿದೆ. ಹುಬ್ಬಳ್ಳಿಯಲ್ಲಿ ರೈಲು.ವಿಮಾನ,ಮತ್ತು ರಸ್ತೆ ಸಾರಿಗೆ ಎಲ್ಲ ಸೌಕರ್ಯಗಳು ಇರುವುದರಿಂದ ಮುಖ್ಯ ಸಾರಿಗೆ ಕೇಂದ್ರವೆಂದೂ ಹುಬ್ಬಳ್ಳಿ ಪರಿಗಣಿಸಲ್ಪಟ್ಟಿದೆ. ಇಂಥಹ ಹುಬ್ಬಳ್ಳಿಗೆ ಬಂದವರು ಇಲ್ಲಿನ ಧರೆಗಿಳಿದ ಸ್ವರ್ಗವೆಂದೇ ಕರೆಸಿಕೊಳ್ಳುತ್ತಿರುವ ನೃಪತುಂಗ ಬೆಟ್ಟಕ್ಕೆ ಒಮ್ಮೆಯಾದರೂ ಭೇಟಿ ನೀಡಲಿಲ್ಲವೆಂದಾದರೆ ನೀವು ಏನನ್ನೋ ಕಳೆದುಕೊಂಡತೆ. ಅಷ್ಟೇ ಅಲ್ಲ ಪರಿಸರಪ್ರಿಯರಿಗಂತೂ ಇದು ಸ್ವರ್ಗವಷ್ಟೇ ಅಲ್ಲ ಇಲ್ಲಿನ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳಲು ಎರಡು ಕಣ್ಣು ಸಾಲದೇನೋ ಎಂಬಂತಿದೆ. ಹುಬ್ಬಳ್ಳಿಯ ಡಾ:ಗೋವಿಂದ ಮಣ್ಣೂರ ಎಂಬುವರ ಹೆಸರಿರುವ ಫಲಕವೊಂದರಲ್ಲಿನ ಈ ಸಾಲುಗಳು ನೃಪತುಂಗ ಬೆಟ್ಟದ ಕುರಿತು ಈ ರೀತಿ ಹೇಳುತ್ತವೆ. ಹತ್ತು ಬಾವಿಗಳಿಗೆ ಒಂದು ಕೆರೆ ಸಮ ಹತ್ತು ಕರೆಗಳಿಗೆ ಒಂದು ಸರೋವರ ಸಮ ಹತ್ತು ಸರೋವರಗಳಿಗೆ ಒಂದು ಸಾಗರ ಸಮ ಹತ್ತು ಸಾಗರಗಳಿಗೆ ಒಬ್ಬ ಸತ್ಪುರುಷ ಸಮ ಹತ್ತು ಸತ...