Monday, September 26, 2016

Nrupatunga Hill.

                           ನೃಪತುಂಗ ಬೆಟ್ಟ (ಧರೆಗಿಳಿದ ಸ್ವರ್ಗ)

     

  ಕರ್ನಾಟಕ ರಾಜ್ಯದ ನಾಲ್ಕನೆಯ ದೊಡ್ಡ ಜಿಲ್ಲೆ ಎಂದು ಪರಿಗಣಿಸಲ್ಟಟ್ಟಿರುವ ಧಾರವಾಡ ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಿನಂತಿರುವ ಜಿಲ್ಲೆ.ಅದರಲ್ಲೂ ಹುಬ್ಬಳ್ಳಿ ಎಂದ ತಕ್ಷಣ ವಾಣಿಜ್ಯೋದ್ಯಮದ ತಾಣ ಎಂದು ಎಲ್ಲರ ಮನದಲ್ಲೂ ಬೇರೂರಿಬಿಟ್ಟಿದೆ.
ಹುಬ್ಬಳ್ಳಿಯಲ್ಲಿ ರೈಲು.ವಿಮಾನ,ಮತ್ತು ರಸ್ತೆ ಸಾರಿಗೆ ಎಲ್ಲ ಸೌಕರ್ಯಗಳು ಇರುವುದರಿಂದ ಮುಖ್ಯ ಸಾರಿಗೆ ಕೇಂದ್ರವೆಂದೂ ಹುಬ್ಬಳ್ಳಿ ಪರಿಗಣಿಸಲ್ಪಟ್ಟಿದೆ.
ಇಂಥಹ ಹುಬ್ಬಳ್ಳಿಗೆ ಬಂದವರು ಇಲ್ಲಿನ ಧರೆಗಿಳಿದ ಸ್ವರ್ಗವೆಂದೇ ಕರೆಸಿಕೊಳ್ಳುತ್ತಿರುವ ನೃಪತುಂಗ ಬೆಟ್ಟಕ್ಕೆ ಒಮ್ಮೆಯಾದರೂ ಭೇಟಿ ನೀಡಲಿಲ್ಲವೆಂದಾದರೆ ನೀವು ಏನನ್ನೋ ಕಳೆದುಕೊಂಡತೆ. ಅಷ್ಟೇ ಅಲ್ಲ ಪರಿಸರಪ್ರಿಯರಿಗಂತೂ ಇದು ಸ್ವರ್ಗವಷ್ಟೇ ಅಲ್ಲ ಇಲ್ಲಿನ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳಲು ಎರಡು ಕಣ್ಣು ಸಾಲದೇನೋ ಎಂಬಂತಿದೆ.


  ಹುಬ್ಬಳ್ಳಿಯ ಡಾ:ಗೋವಿಂದ ಮಣ್ಣೂರ ಎಂಬುವರ ಹೆಸರಿರುವ ಫಲಕವೊಂದರಲ್ಲಿನ ಈ ಸಾಲುಗಳು ನೃಪತುಂಗ ಬೆಟ್ಟದ ಕುರಿತು ಈ ರೀತಿ ಹೇಳುತ್ತವೆ.

ಹತ್ತು ಬಾವಿಗಳಿಗೆ ಒಂದು ಕೆರೆ ಸಮ
ಹತ್ತು ಕರೆಗಳಿಗೆ ಒಂದು ಸರೋವರ ಸಮ
ಹತ್ತು ಸರೋವರಗಳಿಗೆ ಒಂದು ಸಾಗರ ಸಮ
ಹತ್ತು ಸಾಗರಗಳಿಗೆ ಒಬ್ಬ ಸತ್ಪುರುಷ ಸಮ
ಹತ್ತು ಸತ್ಪುರುಷರಿಗೆ ಒಬ್ಬ ಹೆತ್ತ ತಾಯಿ ಸಮ
ಹತ್ತು ತಾಯಂದಿರಿಗೆ ಒಂದು ಮರ ಸಮ
ನೃಪತುಂಗ ಬೆಟ್ಟ ಧರೆಗಿಳಿದ ಸ್ವರ್ಗದ ತುಣುಕು
ಇಲ್ಲಿ ಮಾಡಬೇಡಿ ಕೊಳಕು

ಎಂಬ ಸಂದೇಶ ಇಲ್ಲಿ ಅಳವಡಿಸಿರುವರು.





 ಅಂದ ಹಾಗೆ ಹುಬ್ಬಳ್ಳಿ, ಬೆಂಗಳೂರಿನಿಂದ 400 ಕಿ.ಮೀ. ಧಾರವಾಡದಿಂದ 20 ಕಿ.ಮೀ.ಬೆಳಗಾವಿಯಿಂದ 85 ಕಿ.ಮೀ ವಾಣಿಜ್ಯ ಕೇಂದ್ರ ಛೋಟಾ ಮುಂಬಯಿ ಎಂದೂ ಹುಬ್ಬಳ್ಳಿಯನ್ನು ಕರೆಯುತ್ತಾರೆ.ಇದು ಬೆಂಗಳೂರು-ಪೂನಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4 ರಲ್ಲಿ ಬರುವುದು.ಅಷ್ಟೇ ಅಲ್ಲ ಕಾರವಾರ ಬಂದರು ಕೂಡ ಇಲ್ಲಿಂದ 165 ಕಿ.ಮೀ ಅಂತರವಿದ್ದು ಒಂದೆಡೆ ನೈರುತ್ಯ ರೈಲ್ವೆ ವಲಯ. ಮತ್ತೊಂದೆಡೆ ವಿಮಾನ ನಿಲ್ದಾಣ. 46 ವಾರ್ಡ ಹೊಂದಿದ ಮಹಾನಗರ ಪಾಲಿಕೆ.1997 ರಿಂದ ವಾಯುವ್ಯ ಸಾರಿಗೆ ಸಂಸ್ಥೆಯನ್ನು ಹೊಂದುವ ಮೂಲಕ ರಾಜ್ಯದ ಎಲ್ಲ ಮಾರ್ಗಗಳಿಂದಲೂ ರಸ್ತೆ ಸಾರಿಗೆ ಸಂಪರ್ಕ ಹೊಂದಿದೆ.
   ಹುಬ್ಬಳ್ಳಿ-ಧಾರವಾಡ ನಡುವೆ ಅವಳಿನಗರಗಳಲ್ಲಿ ಸಂಚರಿಸುವ ನಗರ ಸಾರಿಗೆ ಬಸ್‍ಗಳಲ್ಲಿ ದಿನಕ್ಕೆ 55 ರೂಪಾಯಿಗಳ ರಿಯಾಯತಿ ಪಾಸ್ ಸೌಲಭ್ಯವುಂಟು ಇದನ್ನು ಪಡೆದರೆ ಸಾಕು ಹುಬ್ಬಳ್ಳಿ ಧಾರವಾಡವನ್ನು ಒಂದು ದಿನದ ಮಟ್ಟಿಗೆ ಎಲ್ಲೆಂದರಲ್ಲಿ ನಗರ ಸಾರಿಗೆ ಬಸ್‍ಗಳಲ್ಲಿ ಸಂಚರಿಸಬಹುದಾಗಿದೆ. ಒಟ್ಟಾರೆ ಹುಬ್ಬಳ್ಳಿಗೆ ರಸ್ತೆ,ರೈಲು,ವಿಮಾನ ಯಾವುದೇ ಮಾರ್ಗದ ಮೂಲಕ ಬಂದಿಳಿದರೂ ಕೂಡ ನಗರ ಸಾರಿಗೆ ಬಸ್ ಮೂಲಕ ನೃಪತುಂಗ ಬೆಟ್ಟ ತಲುಪಲು ಅನುಕೂಲತೆಗಳಿವೆ. ನಗರ ಸಾರಿಗೆ ಬಸ್‍ಗಳಾದ ಶಿರಡಿನಗರ,ವಿಶ್ವೇಶ್ವರ ನಗರ,ಪರ್ತಕರ್ತರ ನಗರ,ಶಕ್ತಿ ನಗರ ಬಸ್‍ಗಳು ಸಬ್ ಜೈಲ್(ಕಾರಾಗೃಹ) ಹತ್ತಿರದ ಬಸ್ ನಿಲುಗಡೆಯಲ್ಲಿ ನಿಂತು ಹೋಗುತ್ತವೆ. ಅಲ್ಲಿಂದ ಬೆಟ್ಟಕ್ಕೆ ಅರ್ಧ ಕಿಲೋ ಮೀಟರ್‍ನಷ್ಟು ನಡೆದು ಬರಬೇಕು. ಇಲ್ಲವೇ ಅಲ್ಲಿ ನಿಂತಿರುವ ಅಟೋ ಮೂಲಕವೂ ಬರಬಹುದು.
 
 ಹೀಗೆ ಬಂದೊಡನೆ ಮರದ ದಿಂಡಿನಿಂದ ಮಾಡಿದ ಆಕರ್ಷಕ ಸುಸ್ವಾಗತ ಫಲಕ ಅದರ ಪಕ್ಕದಲ್ಲಿ ಪ್ರವೇಶಕ್ಕೆ ಟಿಕೀಟು ಕೌಂಟರ್ ಕಾಣತೊಡಗುತ್ತವೆ. ಇಲ್ಲಿ 12 ವರ್ಷದಿಂದ ಮೇಲ್ಪಟ್ಟ ಎಲ್ಲರಿಗೂ ಹತ್ತು ರೂಪಾಯಿ ದರ ನಿಗದಿಪಡಿಸಿರುವರು. ಇನ್ನು 3 ರಿಂದ 12 ವರ್ಷ ವಯೋಮಾನದ ಒಳಗಿನ ಮಕ್ಕಳಿಗೆ 5 ರೂಪಾಯಿ ಪ್ರವೇಶ ದರ ಇದೆ. ಇದನ್ನು ಪಡೆದು ಒಳ ನಡೆಯತೊಡಗಿದರೆ ಸಾಗು ಸುಸಜ್ಜಿತವಾದ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತ ಎತ್ತರವಾದ ಮರಗಿಡಗಳ ನಡುವೆ ಹುಬ್ಬಳ್ಳಿ ನಗರದ ಸೌಂದರ್ಯ ಕಾಣುತ್ತ ಬಂದರೆ ಸಾಕು ನೃಪತುಂಗ ಬೆಟ್ಟದಲ್ಲಿ ಏನನ್ನು ವೀಕ್ಷಿಸಲು ಸಾಧ್ಯ ಎಂಬ ನಾಮಫಲಕ ಗಮನ ಸೆಳೆಯುತ್ತದೆ.
 
 ಇಲ್ಲಿ ಸಾಂಸ್ಕøತಿಕ ವೇದಿಕೆ,ಉಪಹಾರ ಗೃಹ,ಚಿಕ್ಕ ಮಕ್ಕಳ ಉದ್ಯಾನವನ,ಜಲಪಾತ,ನೀರಿನ ಚಿಲುಮೆ.  ಕಾಜೀ ಪೀರಜಾದೆ ದರ್ಗಾ,ಎರಡು ಧ್ಯಾನ ಮಂದಿರಗಳು, ಸಂತ ರೇವು ಮಾತಾ ಮಂದಿರ, ಜಿಂಕೆವನ,ಇವೆಲ್ಲವುಗಳಿಗೆ ಯಾವ ಮಾರ್ಗದಿಂದ ಸಂಚರಿಸಬಹುದು ಎಂಬ ಮಾರ್ಗಸೂಚಿ ಹೊಂದಿದ ಪ್ರಕಟಣಾ ಫಲಕ ನೋಡಿದರೆ ಸಾಕು ಇಡೀ ಬೆಟ್ಟವನ್ನು ನಾವು ಯಾವ ರೀತಿ ಸುತ್ತಲು ಸಾಧ್ಯ ಎಂದು ಯೋಜನೆ ಮಾಡಬಹುದು. ಮಕ್ಕಳೊಂದಿಗೆ ಬಂದಿದ್ದಲ್ಲಿ ಪ್ರಕಟಣಾ ಫಲಕದ ಎದುರಿಗೆ ಮಕ್ಕಳ ಉದ್ಯಾನವನವಿದೆ. ಅಲ್ಲಿ ಎದುರಿಗೆ ಎರಡು ಹಿಮಕರಡಿಗಳಿವೆ.ಇವು  ಒಂದಕ್ಕೊಂದು ತಮ್ಮ ತಮ್ಮಲ್ಲಿ ಕಚ್ಚಾಡಲು ತಯಾರಾಗಿವೆಯೇನೋ ಎಂಬಂತೆ  ಕಾಣುತ್ತಿವೆ ಹಾಗೆಂದುಕೊಂಡು ಹತ್ತಿರ ಬಂದರೆ ಅವು ಪ್ರತಿಕೃತಿಗಳು ಎಂದು ಗೊತ್ತಾಗುತ್ತದೆ.ಅಲ್ಲಿರುವ ಹುಲ್ಲುಹಾಸಿನಲ್ಲಿ ಕೆಲವು ಬಾತುಕೋಳಿಗಳು ತಮ್ಮಷ್ಟಕ್ಕೆ ತಾವು ಅಡ್ಡಾಡುತ್ತಿವೆ ಪಕ್ಕದ ಮೆಟ್ಟಿಲು ಹತ್ತುವ ಮುನ್ನ ಜಲದೇವಿ ತನ್ನ ಕೊಡದಲ್ಲಿ ನೀರನ್ನು ಹರಿ ಬಿಡುತ್ತಿರುವ ಕಲಾತ್ಮಕ ದೃಶ್ಯ ಮನತುಂಬಿಕೊಂಡು ಮಕ್ಕಳ ಉದ್ಯಾನಕ್ಕೆ ಕಾಲಿಟ್ಟರೆ ಇಲ್ಲಿಯೂ ಕೂಡ ಒಂದು ಸೂಚನೆಯಿದೆ ಇದು ಕೇವಲ ಹನ್ನೆರಡು ವರ್ಷದೊಳಗಿನ ಮಕ್ಕಳಿಗೆ ಮಾತ್ರ ಎಂಬುದು .ಕಾರಣವಿಷ್ಟೇ ಇಲ್ಲಿ ಅಳವಡಿಸಿರುವ ತೂಗು ಜೋಕಾಲಿ,ಜಾರು ಬಂಡೆಯಂತಹ ಆಟಿಕೆ ವಸ್ತುಗಳ ಮೇಲೆ ಹೆಚ್ಚಿನ ಭಾರ ಬೀಳದಿರಲಿ, ನಿಮ್ಮ ಮಕ್ಕಳನ್ನು ಅವರಷ್ಟಕ್ಕೆ ಅವರನ್ನು ಬಿಡಿ ಅವರು ಆಡಿಕೊಂಡಿರಲಿ,ನೀವು ಅಲ್ಲಿ ಹಾಕಿರುವ ಕಲಾತ್ಮಕ ಕಲ್ಲು ಬೆಂಚುಗಳ ಮೇಲೆ ಕುಳಿತು ಸುಮ್ಮನೆ ನೋಡಿ ಇಲ್ಲವೇ ಇಲ್ಲಿಯೂ ನವಿಲು,ಜಲಕುಂಭದ ದೇವಿ ಇತ್ಯಾದಿ ಮೂರ್ತಿಗಳ ಪ್ರತಿಕೃತಿಗಳಿವೆ ಗಿಡಮರಗಳ ಸೌಂದರ್ಯ ರಾಶಿಯಿದೆ.ಇಂಥವುಗಳನ್ನು ಸವಿಯಿರಿ.


 ಮಕ್ಕಳು ಆಡಿ ಸುಸ್ತಾದ ಕೂಡಲೇ ಎದುರಿನ ಉಪಹಾರವನಕ್ಕೆ ಬನ್ನಿ ಉತ್ತಮ ಗುಣಮಟ್ಟದ ತಿಂಡಿತಿನಿಸುಗಳ ಲಭ್ಯತೆ ಇಲ್ಲಿದೆ. ಅಲ್ಲಿಯೇ ಕುಳಿತು ಅದರ ಸವಿ ಸವಿಯಿರಿ.ಇಲ್ಲದಿದ್ದಲ್ಲಿ ನೀವೇ ಏನಾದರೂ ತಂದಿದ್ದಲ್ಲಿ ಹತ್ತಿರವಿರುವ ಹಂಚುಹಾಸಿನ ಗುಡಿಸಿಲಿನ ಮಾದರಿ ವಿಶ್ರಾಂತಿಧಾಮಕ್ಕೆ ಬನ್ನಿ ಅಲ್ಲಿ ಅರಾಮವಾಗಿ ವಿಶ್ರಮಿಸುತ್ತ ಜೊತೆಗೆ ತಂದಿರುವ ತಿಂಡಿ ತಿನಿಸುಗಳ ಸವಿ ಸವಿಯಿರಿ.ಜೊತೆಗೆ ಪಕ್ಕದಲ್ಲಿ ಅಳವಡಿಸಿರುವ ಶುಚಿ-ರುಚಿಯಾದ ನೀರು ಕುಡಿದು.ಅಲ್ಲಿಯೇ ಇರಿಸಿರುವ ಗೋರಿಲ್ಲಾಗಳ ಪ್ರತಿಕೃತಿಗಳಲ್ಲಿ ಕಸವನ್ನು ವಿಲೇವಾರಿ ಮಾಡಿ ಅವುಗಳು ಕೂಡ ನಿಮ್ಮ ಕಸವನ್ನು ಇಲ್ಲಿ ಹಾಕಿ ಎಂಬ ಸಂದೇಶವನ್ನು ಹೊತ್ತು ನಿಂತಿವೆ.ಕಾರಣ ಇಷ್ಟೇ ಇಂಥ ಪ್ರಕೃತಿ ತಾಣಗಳಿಗೆ ಎಲ್ಲಿಯೇ ಹೋಗಲಿ ಅಲ್ಲಿ ಪರಿಸರ ಕಾಳಜಿಯಿಂದ ಮಾಡಿರುವ ಸೂಚನೆ ಅನುಸಾರವಾಗಿ ನಡೆಯಬೇಕಾದದ್ದು ಎಲ್ಲರ ಕರ್ತವ್ಯ.ಈ ಬೆಟ್ಟದ ಯಾವುದೇ ಸ್ಥಳದಲ್ಲಿ ಸಂಚರಿಸಿ ಹುಲ್ಲುಹಾಸಿನ ನಡುವೆ ಅಲ್ಲಲ್ಲಿ ಪರಿಸರ ಕಾಳಜಿಯ ಸಂದೇಶಗಳು ಗಮನ ಸೆಳೆಯುತ್ತವೆ.





ಮರ ನೆಟ್ಟು ಬರ ಅಟ್ಟು, ಸಮಸ್ತ ಜೀವರಾಶಿ ಉಳಿವಿಗೆ ಅರಣ್ಯಗಳು ಅತಿ ಅವಶ್ಯಕ. ಇತ್ಯಾದಿ ಪರಿಸರ ಸಂರಕ್ಷಣೆಯ ಮಹತ್ವ ಸಾರಿದರೆ ಪಾದಚಾರಿಗಳಿಗಾಗಿ ವಿಶೇಷ ವಿನ್ಯಾಸದ ಮಾರ್ಗ ಎಡಬಲಗಳಲ್ಲಿ ಮರದ ದಿಮ್ಮೆ ಬಳಸಿ ಕಲಾತ್ಮಕ ಕಟೌಟಗಳಂತೆ ಕಂಗೊಳಿಸುವ ಗೋಡೆ ಶೈಲಿಯ ಕಲಾತ್ಮಕತೆ ಎಲ್ಲಿ ನೋಡಿದರೂ ಹಸಿರು.ಇಡೀ ಹುಬ್ಬಳ್ಳಿಯ ಎಲ್ಲ ರೀತಿಯ ಸ್ಥಳಗಳನ್ನು ಎತ್ತರದ ವೀಕ್ಷಣಾ ಗೋಪುರದಲ್ಲಿ ಎಲ್ಲ ದಿಕ್ಕುಗಳಲ್ಲಿ ಕಾಣುವ ಅವಕಾಶ ಇಲ್ಲಿದೆ.





   ದಿನನಿತ್ಯದ ಸಂಸಾರದ ಜಂಜಾಟ,ಕೆಲಸದ ನಡುವೆ ಒಂದಿಷ್ಟು ರಿಲಾಕ್ಸ ಬೇಕಿದ್ದಲ್ಲಿ ಇಂಥಹ ಸ್ಥಳಗಳಿಗೆ ಕುಟುಂಬ ಸಹಿತ ಬರುವುದು ಒಳ್ಳೆಯದು. ಇದು ಉಲ್ಲಾಸ,ಸಂತೋಷದ ಜೊತೆಗೆ ಹಿತಕರವಾದ ವಾತಾವರಣದಲ್ಲಿ ತಾಜಾ ಗಾಳಿಯನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಈ ಬೆಟ್ಟಕ್ಕೆ ಪ್ರವೇಶ ಬೆಳಗಿನ 9 ರಿಂದ ಮದ್ಯಾಹ್ನ 1-30 ರ ವರೆಗೆ ನಂತರ 2 ರಿಂದ ಸಂಜೆ 8-30 ರ ವರೆಗೆ ಇದ್ದು ಇದರ ಜೊತೆಗೆ ಬೆಟ್ಟದ ಸುತ್ತ ಮುತ್ತ ವಾಸಿಸುತ್ತಿರುವ ಜನರ ಬೆಳಗಿನ ವಾಯುವಿಹಾರಕ್ಕಾಗಿ ಪ್ರಾತಃಕಾಲ 5 ರಿಂದ 8.30 ರವರೆಗೂ ಅವಕಾಶ ಕಲ್ಪಿಸಲಾಗಿದ್ದು ಕೂಡ ವಿಶೇಷ.ಹಾಗಾದರೆ ಇನ್ನೇಕೆ ತಡ ಹುಬ್ಬಳ್ಳಿಗೆ ಯಾವುದಾದರೂ ಕೆಲಸಕ್ಕೆ ಬರುವುದಾದರೆ ಅಥವ ಉದ್ದೇಶಪೂರ್ವಕವಾಗಿ ಸ್ವಲ್ಪ ಬಿಡುವಿನ ವೇಳೆ ಕಳೆಯಬಯಸಿದ್ದಲ್ಲಿ ತಪ್ಪದೇ ನೃಪತುಂಗ ಬೆಟ್ಟಕ್ಕೆ ಬನ್ನಿ ಆನಂದವನ್ನು ಹೊಂದಿ.



For more information watch video:




--------END-------

Friday, September 23, 2016

Renuka Yellamma temple Saundatti

                                SRI RENUKA YELLAMMA DEVI

                                 (SRI RENUKA DEVI)

 

     
Sri Renukadevi (Ellamma) is the largest devotee in South India with the exception of Tirupati, where a large number of devotees come from all over the country. There is a religious group here throughout the year. It is a historical, historical and religious shrine surrounded by seven caves and seven hillocks.     

In the Skanda Purana, the folk songs, the history, the information in the history, the three Kannada films are also prepared about the Sri Devi mahim..
"Renuka" born to the "King of Renuka" and "Bhogavati", the king of Kashmir, who was born as a blessing of the sage Agastya, the story of her being the wife of Jamadagni, her husband, is truly divine. Mother Ruchikamuni.The mother of Satyavati was found to be equal to her father and mother and gained love and confidence.


Prehistoric Background: -
    
The famous researcher Dr KG Shri Gurumurthy has recorded an account of this in his research and has been worshiped as the subordinate deity of many king Maharajas for many centuries.
Allmam-Satyavati comes under the rule of the Parelakkaras, the Padmavati Devi of the Rattara period in the 6th to 9th centuries, in the reign of the Eastern kings of the Rattara in the second century. (Vaishnava) In the 13th century, Bijapur became part of the sultanate of the Bijapur.In the eighteenth century, the area was given to the devotees of Sirisangi Desai and worshiped as Ellamma (Mother Goddess) during her reign.

  The seven seas


In the ecological range of the hill, there are seven hooks, such as the Siddharanka, Parasangakana, Goravanakana, Thamanna Kola, Mawananka, Sangappananka, Borasaban kal, which are illustrative of the events in the history.

  


Seven hills      

Muragoda, Sogala, Peacock Tirtha, Parasagadha, Savadatti, Munavalli, Ellammanaguda are among the seven hills (hills, mountains) in this range.

   


Temple Specialty:- 




Before entering the temple, it is customary to get into an oil pond.It is commendable that now the government has undertaken special functions in this area and made it easy for all to enter the vast courtyard.        
Visitors to the temple can be seen placing a yellow colored replica on their forehead.
It is customary to take this repository with special respect as the fortune of their Siri wealth.
Those who are spreading their devotion to the temple premises by offering prayers.  

Various authors have written books on the glory of the temple. "ELLARA AMMA ELLAMMA". The books of Sri Sivabasava Shastri's "Renuka Yallammadevi History", Saraswati's publication "Sri Renuka Yallammadevi Mahatme" and many other videos, CDs, DVDs and cassettes of Devi's majestic song are laudable.

    TEMPLE SPECIALS


    
The Goddess is worshiped throughout the year, from 4-30 am to 6 pm daily, and from 4-30 pm to 6 pm..

The village is full of devotees who come to Ellamgudda during the harvest season.Apart from the government bus, many people from neighboring Maharashtra, Andhra Pradesh and Tamil Nadu arrive in their private vehicles..The pilgrimage residence and the lodging in the vicinity of the temple have been facilitated by the temple autority
Parks, fountains, etc. are also in the works.

Distance from major cities:
Bangalore: 470 km
Mangalore: 400 km
Mysore: 535 km
Hubli: 60 km


For more information:


                                                                                                ----
                

Monday, September 19, 2016

Saundatti Kote

ಸವದತ್ತಿ ಕೋಟೆ 

ಸವದತ್ತಿಯು ಬೆಳಗಾವಿ ಜಿಲ್ಲೆಯಲ್ಲಿರುವ ತಾಲೂಕು.ಇದು ಧಾರವಾಡದಿಂದ ಸುಮಾರು 35ಕಿ.ಮೀ. ಅಂತರದಲ್ಲಿದೆ. ಸವದತ್ತಿಯ ನಿಸರ್ಗದಲ್ಲಿ ಕಾಣಸಿಗುವಂತಹ ಸ್ಥಳ ಸವದತ್ತಿಯ ರಟ್ಟರ ಕಾಲದ ಕೋಟೆ.


ರಟ್ಟರ ಕಾಲದ ಕೋಟೆ. 


ಹದಿನೆಂಟನೇ ಶತಮಾನದಲ್ಲಿ ಶಿರಸಂಗಿ ದೇಸಾಯಿಯವರು ಕೋಟೆಯನ್ನು ಕಟ್ಟಿಸಿದರು.ಕೋಟೆಯು 8 ಕೊತ್ತಲಗಳನ್ನು ಹೊಂದಿದ ವಿಶಿಷ್ಟ ರಚನೆಯಾಗಿದೆ. ಕೋಟೆಯ ಮಧ್ಯದಲ್ಲಿ ಕಾಡಸಿದ್ದೇಶ್ವರ ಗುಡಿ ಇದೆ.  
ಕೋಟೆಯು ಸವದತ್ತಿಯ ಮದ್ಯದಲ್ಲಿ ಇದೆ . ಕೋಟೆಯ ಮೇಲಿಂದ ಪೂರ್ತಿ ಸವದತ್ತಿ ಪಟ್ಟಣವನ್ನು ನೋಡಬಹುದು 

            ಕೋಟೆಯು ಎಲ್ಲ ಕಡೆ ತೋಟ ಹುಲ್ಲು ಹಾಸಿಗೆಗಳನ್ನು ಮಾಡಲಾಗಿದೆ. ಮತ್ತು ಕುಳಿತುಕೊಳ್ಳಲು 
ಆಸನಗಳನ್ನು ಮಾಡಲಾಗಿದೆ.

ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ಕೋಟೆಯ ಬಾವಿ ಇಂದ ನೀರಿನ ವ್ಯವಸ್ಥೆ ಮಾಡಲಾಗಿದೆ.


ಹೊರ ಗೋಡೆಗಳು ಮತ್ತು ಕೋಟೆಯ ಕೊತ್ತಲಗಳು ಇನ್ನೂ ಎಲ್ಲಾ ವರ್ಷಗಳ ನಂತರ ಹಾಗೇ ಮತ್ತು ತನ್ನ ಬಲವಾದ ನಿರ್ಮಾಣದ ಸಾಕ್ಷಿಯಾಗಿದೆ.







ಕೋಟೆಯ ಮದ್ಯದಲ್ಲಿ ಕಾಡಸಿದ್ದೇಶ್ವರ ಮಂದಿರವಿದ್ದು. ಪ್ರತಿ ವರ್ಷ ಶ್ರಾವಣದ ಕೊನೆಯ ಸೋಮವಾರ ಜಾತ್ರೆ ನಡೆಯುತ್ತದೆ.



ಇತಿಹಾಸ:-

ಶಿರಸಂಗಿಯ  ಜಯಪ್ಪ ದೇಸಾಯಿ  ಕ್ರಿ.ಶ.1758 ರಲ್ಲಿ ಕೋಟೆಯನ್ನು ನಿರ್ಮಿಸಿದ.ಶಿರಸಂಗಿ ಆಗ ಸಂಸ್ಥಾನ ಎಂದು ಕರೆಯಲಾಗುತ್ತಿತ್ತು.ಜಯಪ್ಪ ದೇಸಾಯಿ ಒಬ್ಬ ಬುದ್ಧಿವಂತ ಆಡಳಿತಾಧಿಕಾರಿಯಾಗಿದ್ದ. ಅವನು ವಿನಮ್ರ ಧಾರ್ಮಿಕ, ಉದಾರ ಮತ್ತು ತನ್ನ ವಿಷಯಗಳ ಅನುಕಂಪ ಹೊಂದಿದ್ದನು . ಜಯಪ್ಪ ದೇಸಾಯಿ ಒಬ್ಬ  ಮಹಾನ್ ವಿದ್ವಾಂಸ ಮತ್ತು ಕವಿ. ಅವರು ಹಲವಾರು ಭಾಷೆಗಳಲ್ಲಿ ಕವನಗಳು ಸಂಯೋಜನೆ ಮತ್ತು ಕಲೆಯ ಪೋಷಕನಾಗಿದ್ದ.

ಇತ  ಎತ್ತರಿಸಿದ ಭೂಮಿಗಳಲ್ಲಿ ಅವನ ರಾಜವಂಶದ ಸುರಕ್ಷತೆ ಮತ್ತು ನಿರ್ಮಿಸಿದ. ಕೋಟೆಗಳ ನಿರ್ಮಾಣಕ್ಕೆ ಮಹತ್ವದ ಹಣ 8.5 ಲಕ್ಷ ರೂಪಾಯಿ ವೆಚ್ಚದಲ್ಲಿ ಕುಸುಗಲ್  ( ಹುಬ್ಬಳ್ಳಿ ತಾಲ್ಲೂಕಿನಲ್ಲಿರುವ ), ಶಿರಸಂಗಿ  ಮತ್ತು ಸವದತ್ತಿ(ಸೌಂದತ್ತಿ)ಯಲ್ಲಿ ಕೋಟೆಗಳು ನಿರ್ಮಿಸಿದ. 1743 ರಲ್ಲಿ ಸವದತ್ತಿ   ಕೋಟೆಯನ್ನು ನಿರ್ಮಿಸಲು ಪ್ರಾರಂಭಿಸಿದರು ಮತ್ತು 2 ಲಕ್ಷ ರೂಪಾಯಿ ವೆಚ್ಚದಲ್ಲಿ 1751 ರಲ್ಲಿ ಪೂರ್ಣಗೊಳಿಸಿದರು  . ಕೋಟೆ 10 ಎಕರೆ ಪ್ರದೇಶದಲ್ಲಿ ಹರಡಿದೆ ಮತ್ತು ಕೆಂಪು ಮರಳು ಕಲ್ಲಿನ ನಿರ್ಮಿಸಲಾಗಿದೆ. ಕೊತ್ತಲಗಳು , ಕಲ್ಲಿನ ಗೋಡೆಗಳನ್ನು, ಕಲ್ಲು ಕಮಾನುಗಳು, ಕಂದಕ ವೀಕ್ಷಿಸಲು ಗೋಪುರಗಳು ಈ ಕೋಟೆಯ ಸೌಂದರ್ಯ ವರ್ಧಿಸುತ್ತವೆ

Check out the video Below: